ಆತ್ಮೀಯ ಸಹಕಾರಿ ಬಂಧುಗಳೇ, ನಮ್ಮನಾಡಿನ ಆರಾಧ್ಯ ದೈವ, ನಮ್ಮ ಬ್ಯಾಂಕಿನ ಕರ್ತೃ ಶಕ್ತಿ, ವರಸಿದ್ಧಿ, ಪ್ರಾತಃಸ್ಮರಣೀಯರಾದ ಶ್ರೀ ಗುರುಸಿದ್ಧೇಶ್ವರನ ಕೃಪಾ ಶೀರ್ವಾದಗಳಿಂದ ಬ್ಯಾಂಕಿನ ಸಂಸ್ಥಾಪಕರಾದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರುಲಿಂ. ಡಾ|| ಗಂಗಾಧರರಾಜ ಯೋಗೀಂದ್ರ ಮಹಾಸ್ವಾಮಿಗಳನ್ನು ಸ್ಮರಿಸಿ, ಹಾಗೂ ಶ್ರೀ ಮನ್ಮಹಾರಜನಿರಂಜನ ಜಗದ್ಗುರು ಡಾ|| ಗುರುಸಿದ್ಧ ರಾಜ ಯೋಗೀಂದ್ರ ಮಹಾಸ್ವಾಮಿಗಳು ಶ್ರೀ ಜಗದ್ಗುರು ಮೂರು ಸಾವಿರ ಮಠ ಮಹಾಸಂಸ್ಥಾನ ಹುಬ್ಬಳ್ಳಿ ಇವರ ಚರಣ ಕಮಲಗಳಲ್ಲಿ ನಮಿಸುತ್ತಾ ನಮ್ಮ ಬ್ಯಾಂಕಿನ ಮಹಾನ್ಶಿಲ್ಪಿಗಳು,ಮಹಾನ್ಚೇತನಗಳಾದ ಸಂಸ್ಥಾಪಕ, ಅಧ್ಯಕ್ಷರಾದಲಿಂ. ಡಾ|| ಎಲ್.ಎಸ್.ಮಾನ್ವಿ, ಲಿಂ.ಶ್ರೀಅಂದಾನೇಶ ಚವಡಿ, ಶ್ರೀ ವೀರಣ್ಣಬ.ಕಲ್ಲೂರ, ಎಲ್ಲಾ ಉಪಾಧ್ಯಕ್ಷರು,ನಿರ್ದೇಶಕರು ಮತ್ತು ಸಂಸ್ಥಾಪಕ ಸದಸ್ಯರುಗಳನ್ನು ಸ್ಮರಿಸುತ್ತಾ,ನಮ್ಮ ಬ್ಯಾಂಕಿನ ೪೪ನೇ ವಾರ್ಷಿಕ ಮಹಾಸಭೆಗೆ ಆಗಮಿಸಿದ ಸದಸ್ಯರೆಲ್ಲರಿಗೂ ನಿರ್ದೇಶಕ ಮಂಡಳಿಯ ಪರವಾಗಿ ಆದರಣೀಯ ಸ್ವಾಗತ ಬಯಸುತ್ತೇನೆ.
ವೈಯಕ್ತಿಕ ಬ್ಯಾಂಕಿಂಗ್ ನಿಮ್ಮ ವ್ಯವಹಾರಗಳಿಗೆ ಬೆಂಬಲ ನೀಡುತ್ತದೆ.
ಮನೆ ಖರೀದಿಸಲು, ವಾಹನ ಪಡೆಯಲು ಅಥವಾ ಶಿಕ್ಷಣಕ್ಕಾಗಿ ಸುಲಭ ಸಾಲ.
ವ್ಯಾಪಾರ ಬ್ಯಾಂಕಿಂಗ್ ನಿಮ್ಮ ವ್ಯವಹಾರ ಬೆಳವಣಿಗೆಗೆ ಸಹಾಯ ಮಾಡುತ್ತದೆ.